ಹೃದಯದ ಬಳಿ ಕೇಳು, ಯೋಧ ದೇವರಲ್ಲವೇ?

ದೇವರು ತಾನು ಎಲ್ಲೆಡೆಯಲ್ಲೂ ಇರಲಾರೆ ಎಂದೇ
ತಾಯಿಯನ್ನು ಸೃಷ್ಟಿಸಿದ ಎನ್ನುತ್ತೇವೆ
ಬಹುಷಃ ದೇವರು ಇದೇ ಕಾರಣಕ್ಕೆ
ಯೋಧನನ್ನೂ ಸೃಷ್ಟಿಸಿರಬಹುದು
ಅಲ್ಲವೇ?

ಒಂದೊಂದು ಬಾರಿ ಹೃದಯದಿಂದ
ಹೀಗೇ ದನಿಯೊಂದು ಕೇಳಿಬರುತ್ತದೆ
ದೇವರೇ ಯೋಧನ ಸೃಷ್ಟಿಸಿದರೋ
ಅಥವಾ ಯೋಧನೇ ಪ್ರತ್ಯಕ್ಷ ದೇವರೊ?

ಮನದೊಳಗಿನ ಭೂಕಂಪ, ಪ್ರವಾಹದ ಸಂಕಟದಿಂದ ಪಾರು ಮಾಡುವವ  ಚೈತನ್ಯವು ದೇವರಾದರೆ 
ಸುರಿಯುವ ಮಳೆ, ಭೋರ್ಗರೆದು ಹರಿಯುವ ಹೊಳೆಯನ್ನೂ ಲೆಕ್ಕಿಸದೆ
ಕಾಪಾಡುವ ಯೋಧನೂ ದೇವರಲ್ಲವೇ?

ಭಕ್ತಿಯಿಂದ ನೀಡಿದ ಒಂದಗಳು ಅನ್ನಕ್ಕೂ ಒಲಿಯುವ ಕರುಣಾಮಯೇ
ದೇವರು ಎಂದಾದರೆ
ನೀವೆಸೆದ ಕಲ್ಲಿನ ಗಾಯ ಮಾಸುವ ಮುನ್ನವೇ ನಿಮ್ಮ ರಕ್ಷಣೆಗಾಗಿ ಧಾವಿಸುವ
ಯೋಧ ದೇವರಲ್ಲವೇ?

ಬಹಳಷ್ಟು ಜನ ಸಂಕಟದಲ್ಲಿ ಮಾತ್ರ ದೇವರನ್ನು ನೆನೆಯುತ್ತೇವೆ
ವಿಪತ್ತಿನಲ್ಲಿ ಮಾತ್ರವೇ ಯೋಧರ ನೆನೆಯುತ್ತೇವೆ
ಹೃದಯದ ಮೇಲೆ ಕೈಯಿಟ್ಟು ಕೇಳಿ
ಯೋಧನೂ ದೇವರಲ್ಲವೇ?

ಭಗವಂತನಿಗೆ ಹಲವರು ಸ್ವರೂಪಗಳಿವೆ
ಆದರೆ ದೇವರೊಬ್ಬನೇ
ಹಲವಾರು ಬಣ್ಣದ ಸಮವಸ್ತ್ರ ಧರಿಸಿ ಬರಬಹುದು
ಆದರೆ ಯೋಧರ ಹೃದಯದ ಬಡಿತ ಹೇಳುವ ಶಬ್ದ ಎಂದಿಗೂ ಒಂದೇ

ಭಗವಂತನ ಅವಕೃಪೆಗೆ ಭಯಬೀಳುವ ನಮಗೆ,
ಯೋಧನಿಗೆ ನೀಡಬೇಕಾದ ಗೌರವದ ಪರಿವೆ ಇಲ್ಲದಾಗಬಹುದೇ?
ಆದರೂ ಯೋಧ ನಿಮಗೆ ಸಹಾಯ ಮಾಡುವ ಸಂದರ್ಭದಲ್ಲಿ ಮುಖ
ತಿರುಗಿಸಿಹನೆ?
ಮನದ ಮೂಲೆಯ ಆತ್ಮ ಸಾಕ್ಷಿಯ ಕೇಳು
ಯೋಧ ದೇವರಲ್ಲವೇ?

Popular posts from this blog

ಸಂನ್ಯಾಸ ಪ್ರಜ್ಞಾನಂ - ಸತ್ಯ 1

solder is God, how can he not be

Remembering the Hero of Battle of Mantalai - General Zorawar Singh on his Punya Tithi