ಪತ್ರಿಕಾ ವಿತರಕರ ದಿನಾಚರಣೆಯ ಶುಭಾಶಯಗಳು
ಊರೆಲ್ಲಾ ಇನ್ನೂ ಗಾಢ ನಿದ್ದೆಯಲ್ಲಿರುವಾಗಲೇ ಇವರು ಲಗುಬಗೆಯಿಂದ ಎದ್ದು ಯಾವುದೋ ಬೀದಿಯ ಮೂಲೆಯಲ್ಲಿ ಪತ್ರಿಕೆಗಳನ್ನು ಜೋಡಿಸುತ್ತಿರುತ್ತಾರೆ .
ಮಳೆಯಿರಲಿ , ಚಳಿಯಿರಲಿ ಇವರ ಸೈಕಲ್ಲು ಅಥವಾ ಸ್ಕೂಟರ್‌ಗಳು ಪ್ರತಿದಿನ ಕರಾರುವಾಕ್ಕಾಗಿ ಒಂದೇ ಸಮಯಕ್ಕೆ ಪತ್ರಿಕೆಗಳನ್ನು ಹೊತ್ತು ಮನೆಮನೆಗೆ ಧಾವಿಸುತ್ತಾರೆ
ಜನರು ಬೆಳಿಗ್ಗೆ ಎದ್ದು ಮನೆಯ ಮುಂದ ನೀರು ಹಾಕುವುದಕ್ಕಿಂತ ಮೊದಲು ಗೇಟಿನೊಳಗೆ ಇವರು ಎಸೆದ ದಿನಪತ್ರಿಕೆ ಬಂದು ಬಿದ್ದಿರುತ್ತದೆ . ಇವರು ಇಲ್ಲದೆ ದಿನಪತ್ರಿಕೆಗಳಿಲ್ಲ . ಇವರು ಇಲ್ಲದೆ ಜನರ ಕೈಗೆ ದಿನಪತ್ರಿಕೆ ಸಿಗುವುದಿಲ್ಲ . ಇವರು ಪತ್ರಿಕಾ ವಿತರಕರು , ಒಂದು ದಿನವೂ ತಪ್ಪದೆ ಜನರಿಗೆ ಸುದ್ದಿಯನ್ನು ಹಂಚುವ ಕಾಯಕನಿಷ್ಠೆಯ ಶ್ರಮಜೀವಿಗಳು . ಇಂದು ಜಗತ್ತಿನೆಲ್ಲೆಡೆ ಈ ಪತ್ರಿಕಾಯೋಧರನ್ನು ನೆನೆಯುವ ದಿನ , ದಿನಪತ್ರಿಕೆಗಳು ಹಾಗೂ ಓದುಗರ ಪರವಾಗಿ ಅವರಿಗೊಂದು ಪ್ರಣಾಮಗಳು.
ವಿಶ್ವ ಪತ್ರಿಕಾ ವಿತರಕರ ದಿನ