ಪ್ರಜ್ಞಾನಂ ಧರ್ಮ

ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ 


ಒಂದೇ ಜಾತಿ,ಒಂದೇ ಮತ ,ಒಬ್ಬನೇ ದೇವರು” ಎಂದು ಅಸ್ಪೃಶ್ಯತೆ ನಿವಾರಣೆಗಾಗಿ ೧೮ ನೇ ಶತಮಾನದಲ್ಲೇ ಸಮುದಾಯದ ಏಳಿಗೆಗೆ ಶ್ರಮಿಸಿದವರು ಶ್ರೀ ನಾರಾಯಣ ಗುರುಗಳು. ೧೮ ನೇ ಶತಮಾನದ ಮಧ್ಯಭಾಗದಲ್ಲಿ ತಿರುವಾಂಕೂರು ರಾಜ್ಯದ ಇಂದಿನ ತಿರುವನಂತಪುರದಲ್ಲಿ ‘ಶತಭಿಷಾ’ ನಕ್ಷತ್ರದಲ್ಲಿ ನಾರಾಯಣ ಗುರುಗಳ ಜನನವಾಯಿತು. ಬಾಲ್ಯದಲ್ಲಿ ನಾಣು ಎಂದು ಕರೆಯಲ್ಪಡುತ್ತಿದ ಅವರು ಬಾಲ್ಯದಿಂದಲೇ ಅಧ್ಯಾತ್ಮ,ದೇವರು,ಸಮಾನತೆಗಳಲ್ಲಿ ವೊಲವನ್ನು ಹೊಂದಿದ್ದರು.ಬೆಳೆಯುತ್ತಾ ಹೋದಂತೆ ಆಧ್ಯಾತ್ಮಿಕತೆಯನ್ನು ಪೋಷಿಸಿ ಬೆಳೆಯುತ್ತಾ ಹೋದ ನಾಣು ನಾರಾಯಣ ಗುರುಗಳಾಗಿ ಖ್ಯಾತರಾದರು.

ಕೇರಳದಾದ್ಯಂತ ಪ್ರಭಾವೀ ಗುರುಗಳಾಗಿ ಬೆಳೆದ ನಾರಾಯಣಗುರುಗಳನ್ನೇ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸುವ ಅದ್ಭುತವಾದ ಆಲೋಚನೆಯೊಂದು ಕೇರಳದಲ್ಲಿ ವ್ಯಾಪಕವಾಗಿ ಮತಾಂತರವನ್ನು ನಡೆಸುತ್ತಿದ್ದ ಕ್ರಿಶ್ಚಿಯನ್ನರ ತಲೆಯಲ್ಲಿ ಬಂದಿತ್ತು.ಗುರುವನ್ನೇ ಮತಾಂತರಿಸಿದರೆ ಅವರ ಶಿಷ್ಯಂದಿರನ್ನು ಸುಲಭವಾಗಿ ಮತಾಂತರಿಸಬಹುದು ಎಂಬ ಯೋಜನೆಯನ್ನು ಹಾಕಿಕೊಂಡು ಜಾನ್ ಎಂಬ ಕ್ರಿಶ್ಚಿಯಾನಿಟಿಯನ್ನು ಅರೆದು ಕುಡಿದ ಮಹಾಶಯ ಗುರುಗಳೊಂದಿಗೆ ವಾದ ಮಾಡಲು ಬಂದ. ಗುರುಗಳ ಅಪಾರ ಪಾಂಡಿತ್ಯ ಹಾಗೂ ಹಿಂದೂ ಧರ್ಮದ ಮೌಲ್ಯಗಳನ್ನು ಅರಿತು ಅವನೇ ಮತಾಂತರ ಹೊಂದಿ ನಾರಾಯಣ ಗುರುಗಳ ಶಿಷ್ಯನಾಗಿ ಬದಲಾದ.ಮತ್ತೊಂದು ಬಾರಿ ಮೌಲ್ವಿಯೊಬ್ಬ ಗುರುಗಳ ಬಳಿ ವಾದ ಮಾಡಲು ಬಂದು “ ಕುರಾನನ್ನು ಅರಿತಿರುವ ಮಹಾ ಪಂಡಿತರು ನೀವು”ಎಂದು ಗುರುಗಳಿಗೆ ಕೈಮುಗಿದು ಹೊರಟು ಹೋಗಿದ್ದರು. ಹೀಗೆ ನಾರಾಯನು ಗುರುಗಳು ಯಾವುದೇ ವಾದವಿವಾದಗಳು ,ವ್ಯರ್ಥವಾದ ಆರ್ಭಟಗಳಿಲ್ಲದೆ ತಮ್ಮ ಅರಿವು ಮತ್ತು ಜ್ಞಾನದಿಂದಲೇ ಶಿಷ್ಯಗಣವನ್ನು ಸಂಪಾದಿಸಿದ್ದರು.

೧೮ ನೇ ಶತಮಾನದಲ್ಲಿಯೇ ಪಾಶ್ಚಾತ್ಯರ ಮೇಲಿನ ಹೆಚ್ಚುತ್ತಿರುವ ಒಲವಿನ ಬಗ್ಗೆ ಅರಿತಿದ್ದ ಗುರುಗಳು ತ್ರಿಭಾಷಾ ಶಿಕ್ಷಣವನ್ನು ಅನುಮೋದಿಸಿದ್ದರು.ಮಾತೃಭಾಷೆಯಾದ ಮಲಯಾಳ,ಧಾರ್ಮಿಕ ಭಾಷೆಯಾದ ಸಂಸ್ಕೃತ ಮತ್ತು ಆಧುನೀಕತೆಗೆ ತೆರೆದುಕೊಳ್ಳಲು ಆಂಗ್ಲಭಾಷೆಯಾದ ಇಂಗ್ಲಿಷ್. ‘ ವಿದ್ಯೆಯಿಂದ ಸ್ವತಂತ್ರರಾಗಿರಿ ,ಸಂಘಟನೆಯಿಂದ ಬಲಶಾಲಿಯಾಗಿರಿ’ ಎಂದು ಇಂದಿಂದ ಪ್ರಮುಖ ಆವಶ್ಯಕತೆಯಾದ ಸಂಘಟನೆ ಮತ್ತು ವಿದ್ಯೆಯ ಮಹತ್ವವನ್ನು ೧೮ ನೇ ಶತಮಾನದಷ್ಟು ಪೂರ್ವದಲ್ಲೇ ಪ್ರತಿಪಾದಿಸಿದ್ದರು.ಕೇವಲ ಮಾತಿನಲ್ಲಷ್ಟೇ ವಿಚಾರಗಳನ್ನು ಹೇಳದೆ ಕೃತಿಯಲ್ಲೂ ತೋರಿಸಿದ್ದು ಗುರುಗಳ ಹೆಗ್ಗಳಿಕೆ.ಭಾರತದಲ್ಲೇ ಪ್ರಥಮವಾಗಿ ಗುರುಕುಲದಲ್ಲಿ ಆಂಗ್ಲಭಾಷೆಯ ಶಿಕ್ಷಣವನ್ನು ನೀಡಲು ಪ್ರಾರಂಭಿಸಿದ ಶ್ರೇಯವು ನಾರಾಯಣ ಗುರುಗಳಿಗೆ ಸಲ್ಲುತ್ತದೆ.ಠೇವಣಿ ಇಡುವ ಕಲ್ಪನೆಯನ್ನು ಅಂದೇ ಪ್ರತಿಪಾದಿಸುತ್ತಿದ್ದ ನಾರಾಯಣ ಗುರುಗಳು ತಮ್ಮ ಅನುಯಾಯಿಗಳಿಗೆ ತಾವು ಗಳಿಸಿದ ಸಂಪಾದಿಸಿದ ಹಣದಲ್ಲಿ ಒಂದು ಭಾಗವನ್ನು ಉಳಿಸಿಡುವ ಜೀವನ ಶೈಲಿಯನ್ನು ಬೆಳೆಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದರು.

ಎಲ್ಲಾ ವರ್ಗಗಳ ಜನರೂ ಆರಾಧಿಸಲು ಅನುಕೂಲವಾಗುವಂತೆ ೪೧ ದೇವಾಲಯಗಳನ್ನು ಸ್ಥಾಪಿಸಿದ ನಾರಾಯಣ ಗುರುಗಳು.ಕುದ್ರೋಳಿಯಲ್ಲಿಯೂ ಶಿವಲಿಂಗವನ್ನು ಸ್ಥಾಪಿಸಿದ್ದರು.ಸರ್ವ ಧಾರ್ಮ ಸಮನ್ವಯತೆಯನ್ನು ಪ್ರತಿಪಾದಿಸುತ್ತಿದ್ದ ನಾರಾಯಣಗುರುಗಳು ತಾವು ಸ್ಥಾಪಿಸಿದ ದೇವಾಲಯದಲ್ಲಿ ಹಿಂದುಳಿದ ಜನರಿಗೆ ರಾತ್ರೆಶಾಲೆಯಲ್ಲಿ ಶಿಕ್ಷಣವನ್ನೂ ನೀಡುತ್ತಿದ್ದರು.ಕೇರಳದ ಕಲಾವಂಗೋಡಿನ ದೇವಾಲಯದಲ್ಲಿ ಶಿವಲಿಂಗದ ಬದಲಾಗಿ ಸತ್ಯ,ಧರ್ಮ,ದಯೆ ಮತ್ತು ಶಾಂತಿ ಎಂದು ಬರೆದ ಕನ್ನಡಿಯೊಂದನ್ನು ಪ್ರತಿಷ್ಠಾಪಿಸಿದ್ದರು.ಕನ್ನಡಿಯಲ್ಲಿ ತಮ್ಮ ಬಿಂಬವನ್ನು ಕಾಣುವ ಜನರು ಬರೆದಿರುವ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ದೈವತ್ವವನ್ನು ಹೊಂದಬೇಕೆಂಬುದು ಅವರ ಆಶಯವಾಗಿತ್ತು.ದೇವಾಲಯವೊಂದರಲ್ಲಿ ಕೇಸರಿ ವಸ್ತ್ರವನ್ನು ಧರಿಸಿ ಲಿಂಗ ಪ್ರತಿಷ್ಠಾಪಿಸುವಾಗ ಹಲವಾರು ಅವರ ಕೇಸರಿ ವಸ್ತ್ರಕ್ಕೆ ಆಕ್ಷೇಪಣೆಯನ್ನೆತ್ತಿದ್ದರು.ಆಗ ಅವರ ಅನುಯಾಯಿಗಳು ಹಳದಿ ವಸ್ತ್ರವು ಬುದ್ದಿಯ ಸಂಕೇತ ಅದನ್ನು ಬುದ್ಧನೂ ಧರಿದ್ದಾನೆ ,ನೀವು ಧರಿಸಿ ಎಂಬ ಸಲಹೆಯನ್ನು ನೀಡಿದ್ದರು.ಆಗ ಮಾರುತ್ತರ ನೀಡದೆ ಸುಮ್ಮನಿದ್ದ ಗುರುಗಳು ಕೇಸರಿ ವಸ್ತ್ರ ತೊಡುವುದನ್ನು ಇಂದಿಗೂ ತ್ಯಜಿಸಲಿಲ್ಲ.

ಕೇರಳವೊಂದು ಹುಚ್ಚರ ಸಂತೆ ಇದು ಎಂದಿಗೂ ಬದಲಾಗದು ಎಂದು ಅಭಿಪ್ರಾಯ ವ್ಯಕ್ತಿಪಡಿಸಿದ್ದ ವಿವೇಕಾನಂದರು “ ಇಲ್ಲೊಬ್ಬ ಮಹಾ ಸಂತ ಹುಟ್ಟಿಬರುತ್ತಾನೆ,ನಂತರ ಈ ನಾಡಿನಲ್ಲಿ ಹಿಂದೂ ಧರ್ಮವು ಮತ್ತೆ ಅಭಿವೃದ್ಧಿಯನ್ನು ಹೊಂದುತ್ತದೆ” ಎಂದೂ ಹೇಳಿದ್ದರು.ಮಹಾತ್ಮಾ ಗಾಂಧಿ ‘ನನಗೆ ಉಪವಾಸ ಸತ್ಯಾಗ್ರಹ ಮಾಡಲು ಪ್ರೇರಣೆಯೇ ಗುರುನಾರಾಯಣ ಸ್ವಾಮಿಗಳು,ಅವರ ಭೇಟಿಯ ನಂತರ ನಾನು ಬದಲಾಗಿದ್ದೇನೆ” ಎಂದು ಹೇಳಿದ್ದರು. “ ನಾನು ಹಲವಾರು ದೇಶಗಳನ್ನು ಸುತ್ತಿ ಬಂದಿದ್ದೇನೆ,ಹಲವಾರು ದಾರ್ಶನಿಕರನ್ನೂ ಭೇಟಿಯಾಗಿದ್ದೇನೆ,ಆದರೆ ನಾರಾಯಣ ಗುರುಗಳಷ್ಟು ಜ್ಞಾನಸಂಪನ್ನ ವ್ಯಕ್ತಿಯನ್ನು ನಾನು ಎಲ್ಲಿಯೂ ನೋಡಿಲ್ಲ”ಎಂದು ಶ್ರೀ ರವೀಂದ್ರನಾಥ್ ಟಾಗೋರ್ ಅವರು ಹೇಳಿದ್ದರು. ಎಲ್ಲರಿಗೂ ಸದಾಕಾಲ ಪ್ರೇರಣಾ ಶಕ್ತಿಯಾಗಿರುವ ನಾರಾಯಣಗುರುಗಳ ಜಯಂತಿ ಇಂದು.ನಾರಾಯಣ ಗುರುಗಳು ಹೇಳಿದಂತೆ ನಾವೆಲ್ಲರೂ ಸತ್ಯ,ಧರ್ಮ,ದಯೆ ಮತ್ತು ಶಾಂತಿಯ ಮಾರ್ಗದಲ್ಲಿ ಮುನ್ನಡೆಯೋಣ.

Popular posts from this blog

ಸಂನ್ಯಾಸ ಪ್ರಜ್ಞಾನಂ - ಸತ್ಯ 1

Remembering the Hero of Battle of Mantalai - General Zorawar Singh on his Punya Tithi

ಹೃದಯದ ಬಳಿ ಕೇಳು, ಯೋಧ ದೇವರಲ್ಲವೇ?