Prajnanam Shourya
ಕನಸು ಕಂಗಳಲಿ
ಕನಸುಗಳೇ ಇರಲಿಲ್ಲ
ಮನದಲ್ಲಿ ಮಾಡಿದ್ದ ನಿಶ್ಚಯದಿ
ಸಂದೇಹ ಇರಲಿಲ್ಲ
ತಂದೆಯ ಹೆಜ್ಜೆಯ ಜಾಡನ್ನೇ ಹಿಡಿದು
ಹೊರಟ ಪುಟ್ಟ ಕಾಲ್ಗಳು
ಸಿಂಹದ ನಡಿಗೆಯಾಗಬಹುದೆಂದು
ಭಾವಿಸಿದ್ದವರ್ಯಾರು?
ಪರ್ವತಗಳಲ್ಲೇ ಬೆಳೆದ ಜೀವಕ್ಕೆ
ಪರ್ವತದಲ್ಲಡಗಿದ ಶತ್ರುಗಳ ಭಯವಿರಲಿಲ್ಲ
ಅವರು ಧೀರರಲ್ಲೇ ಧೀರರ ಪಡೆಯಲ್ಲಿ
ಹೆಜ್ಜೆಯೂರಿದವರು
ಕಣ್ಣಲ್ಲಿ ಕಿಚ್ಚು,ಭಯವಿಲ್ಲದ ಹೃದಯ
ಎದೆ ಎತ್ತಿ ನಿಂತರೆ ಶತ್ರುವಿನ ಮನದಲ್ಲಿ ನಡುಕ
ಭಯವೆಂದರೇನೆಂದು ಅರಿಯದ ಬಿಸಿ ರಕ್ತದ
ಮಗನಲ್ಲಿ ದೇಶ ಸೇವೆಯ ತುಡಿತ
ಶಾಂತಿ ಪಾಲನೆಗಾಗಿ ಶ್ರೀಲಂಕವಾದರೂ ಸರಿ,
ಶತ್ರುಗಳ ಹಿಮ್ಮೆಟ್ಟಿಸಲು
ಕಾಶ್ಮೀರವಾದರೂ ಸರಿ
ಸುಮ್ಮನೇ ಸಿಗಲಿಲ್ಲ ಎರಡೆರಡು ಸೇನಾ ಪದಕ
30 ಸಾಯುವ ವಯಸ್ಸು ಅಲ್ಲವೇ ಅಲ್ಲ,
ಆದರೆ ಅಮರರಾಗಲು ವಯಸ್ಸಿನ ಹಂಗಿಲ್ಲವಲ್ಲ
ಬಯಸಿದ ಸಾವನ್ನೇ ಪಡೆದ ಸಾರ್ಥಕ ಬದುಕಿಗೆ
ಅಶೋಕ ಚಕ್ರವಷ್ಟೇ ಉಳಿಸಿದ್ದು ತನ್ನವರ ಪಾಲಿಗೆ