Prajnanam-Shourya
ಹೃದಯ ಬಡಿತ ಹೆಚ್ಚಾಗಿದೆ
ಹಿಡಿತಕ್ಕೆ ಸಿಗದಾಗಿದೆ
ಕನಸುಗಳು ಮತ್ತೊಮ್ಮೆ ಗರಿಗೆದರಿ
ಗುರಿಯತ್ತ ಮುಖಮಾಡಿದೆ
ಕೇವಲ ಸ್ತ್ರೀ ಎಂದರೆ ಅಷ್ಟೇ ಸಾಕೇ?
ಹಡೆದಾಗ, ಪೊರೆವಾಗ
ಮಮತೆಯ ಹೊಳೆಯಲ್ಲಿ ಮೀಯಿಸುವ
ಕಣ್ಣೀರು ಹರಿಸಿದರೆ, ತಾನೂ ಕಣ್ಣೀರ ಸುರಿಸುತ್ತ ಮರುಗುವ ಅವಳ
ಕೇವಲ ಸ್ತ್ರೀ ಎಂದರೆ ಅಷ್ಟೇ ಸಾಕೇ?
ಬಂಧಗಳ ಬೇಲಿಯಲಿ, ಮರುಗುತ್ತ ಕೂರದೇ
ರೆಕ್ಕೆಯನು ಬಿಚ್ಚುತ್ತಾ ಗಗನಕ್ಕೆ ಹಾರುವ
ಸ್ವಾಭಿಮಾನದ ಹೆಣ್ಣ
ಕೇವಲ ಸ್ತ್ರೀ ಎಂದರೆ ಅಷ್ಟೇ ಸಾಕೇ?
ಇಲ್ಲಿ ಬಂಧನದ ಭಯವಿಲ್ಲ, ಹೀಗೆಳೆಯುವ ಜನರಿಲ್ಲ
ಲೋಹದಾ ಹಕ್ಕಿಗೆ ಸ್ತ್ರೀ ಲಿಂಗದರಿವಿಲ್ಲ
ಅವಳದ್ದೇ ಶಕ್ತಿ, ದೇಶದೆಡೆಗೆ ಅಪರಿಮಿತ ಭಕ್ತಿ.
ಕೊನೆಯಿಲ್ಲ, ಮೊದಲಲ್ಲ, ಅವಳ ತಡೆಯುವವರಿಲ್ಲ, ದೇಶವಾ ಕಾಯ್ವವಳ
ಕೇವಲ ಸ್ತ್ರೀ ಎಂದರೆ ಅಷ್ಟೇ ಸಾಕೇ?